ಡೆ ಬಾರೀ, ಹೈನ್ರಿಕ್ ಆಂಟೊನ್
1831-1888. ಜರ್ಮನ್ ಸಸ್ಯವಿe್ಞÁನಿ ಹಾಗೂ ವೈದ್ಯ. ಶಿಲೀಂಧ್ರಗಳ, ಅದರಲ್ಲೂ ಪರೋಪಜೀವಿ ಶಿಲೀಂಧ್ರಗಳ ಜೀವನಚರಿತ್ರೆಯನ್ನು ಕುರಿತು ಆಳವಾದ ಅಧ್ಯಯನ ನಡೆಸಿದ. ಅನುಬದ್ಧ ಸಂಯೋಗವುಳ್ಳ ಪಾಚಿ ಮತ್ತು ಜರೀಗಿಡಗಳಲ್ಲಿನ ಅಪಯುಗ್ಮ ಜನನವನ್ನು ಕುರಿತು ಸಂಶೋಧನೆಯನ್ನೂ ಮಾಡಿದ. ಈತನ ಸಂಶೋಧನೆಗಳು ಪರೋಪಜೀವನ ಮತ್ತು ಸೋಂಕುಗಳಿಗೆ ಸಂಬಂಧಿಸಿದಂತೆ ಆಧುನಿಕ ಕಲ್ಪನೆಗಳನ್ನು ಬೆಳೆಸಿವೆ. ಶರೀರರಚನಾತ್ಮಕ ದೃಷ್ಟಿಯಿಂದ ಶಿಲೀಂಧ್ರಗಳ ಅಧ್ಯಯನವನ್ನು ಮಾಡುವುದು ಬಿಟ್ಟು, ವಿಕಾಸಾತ್ಮಕ ದೃಷ್ಟಿಯಿಂದ ಮಾಡಿದುದು ಈತನ ಹಿರಿಮೆ.

	ಫ್ರಾಂಕ್‍ಫುರ್ಟ್ ಆಮ್ ಮೇನ್ ಎಂಬಲ್ಲಿ 1831ರ ಜನವರಿ 26ರಂದು ಜನನ. ತಂದೆ ಆಗಸ್ಟ್ ತೀಯೊಡೋರ್ ಡೆ ಬಾರೀ ವೈದ್ಯನಾಗಿದ್ದ. ಹೈನ್ರಿಕ್ ಫ್ರಾಂಕ್ ಫುರ್ಟಿನ ಗಿಮ್ನಾಸಿಯೂಮ್ ಶಾಲೆಯಿಂದ ಪದವೀಧರನಾಗಿ (1848) ಅನಂತರ ಹೈಡಲ್‍ಬರ್ಗ್, ಮಾರ್‍ಬರ್ಗ್ ಮತ್ತು ಬರ್ಲಿನ್‍ಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದು 1853ರಲ್ಲಿ ವೈದ್ಯಕೀಯ ಪದವಿ ಪಡೆದ. ಕೊಂಚಕಾಲ ಫ್ರಾಂಕ್‍ಫುರ್ಟಿನಲ್ಲೇ ವೈದ್ಯ ವೃತ್ತಿಯನ್ನೂ ಕೈಗೊಂಡ. ಆದರೆ ಇವನ ಆಸಕ್ತಿ ಬಲುಬೇಗ ಸಸ್ಯವಿe್ಞÁನದ ಕಡೆಗೆ ವಾಲಿತು. ಬಾಲ್ಯದಿಂದಲೂ ಈತನ ಒಲವೆಲ್ಲ ಸಸ್ಯಗಳ ಅಧ್ಯಯನದ ಕಡೆಗೇ ಇತ್ತು. ಆಗಿಂದಾಗ್ಗೆ ಗಿಡಮರಗಳ ಸಂಗ್ರಹಣೆಗೆಂದು ಕಾಡುಮೇಡುಗಳನ್ನು ಅಲೆಯುತ್ತಿದ್ದ. ಶಾಲೆಯಲ್ಲಿದ್ದಾಗ, ಬರ್ಲಿನ್‍ನಲ್ಲಿ ವೈದ್ಯಶಾಸ್ತ್ರ ಅಧ್ಯಯನ ನಡೆಸುತ್ತಿದ್ದಾಗ ಜಾರ್ಜ್ ಫ್ರೆಸೀನಿಯಸ್, ಅಲೆಕ್ಸಾಂಡರ್ ಬ್ರೌನ್, ಕ್ರಿಶ್ಚನ್ ಗಾಟ್‍ಫ್ರೀಡ್ ಏರನ್‍ಬರ್ಗ್, ಯೋಹಾನೆಸ್ ಮ್ಯೂಲರ್ ಮುಂತಾದ ಪ್ರಸಿದ್ಧ ಸಸ್ಯವಿe್ಞÁನಿಗಳ ಕೆಳಗೆ ವಿದ್ಯಾರ್ಥಿಯಾಗಿದ್ದು ಸಸ್ಯಗಳ, ಅದರಲ್ಲೂ ಪಾಚಿ ಮತ್ತು ಶಿಲೀಂಧ್ರಗಳ ಬಗ್ಗೆ ಆಳವಾದ ಅಭ್ಯಾಸಮಾಡಿದ್ದ. ವೈದ್ಯಪದವಿಗಾಗಿ ಈತ ಬರೆದ ಪ್ರಬಂಧದ ವಸ್ತುಕೂಡ ಸಸ್ಯಗಳ ವಿಷಯವೇ ಆಗಿತ್ತು. ವೈದ್ಯವೃತ್ತಿ ಬಿಟ್ಟು ಟ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕನೂ ಪ್ರಸಿದ್ಧ ಸಸ್ಯವಿe್ಞÁನಿ ಹ್ಯೂಗೊ ಫಾನ್ ಮೋಲನ ಸಹಾಯಕನೂ ಆದ. 1855ರಲ್ಲಿ ಹೈನ್ರಿಕ್ ಡೆ ಬಾರೀ ಫ್ರೈಬರ್ಗಿನಲ್ಲಿ ಸಸ್ಯವಿe್ಞÁನಿಯಾಗಿ ನೇಮಕಗೊಂಡು ಸಸ್ಯಶಾಸ್ತ್ರದ ಪ್ರಪ್ರಥಮ ಪ್ರಯೋಗಶಾಲೆಯನ್ನು ಅಲ್ಲಿ ಸ್ಥಾಪಿಸಿದ. 1867ರಲ್ಲಿ ಹಾಲೆ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದ. ಕೊಂಚಕಾಲದ ಅನಂತರ ಬೊಟ್ಯಾನಿಷೆ ಟ್ಸೈಟುಂಗ್ ಎಂಬ ಪತ್ರಿಕೆಯ ಸಂಪಾದಕನೂ ಆಗಿ ಸಸ್ಯಶಾಸ್ತ್ರದ ಮುನ್ನಡೆಗೆ ಸಾಕಷ್ಟು ಶ್ರಮಿಸಿದ. 1872ರ ಅನಂತರ ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದ ಸಸ್ಯವಿe್ಞÁನದ ಪ್ರಾಧ್ಯಾಪಕನೂ ಅದರ ಪ್ರಥಮ ರೆಕ್ಟರನೂ ಆಗಿದ್ದ.

	ಶಿಲೀಂಧ್ರಗಳ ಹಾಗೂ ಮಿಕ್ಸೋಮೈಸಿಟೀಗಳ ರೂಪರಚನೆ ಮತ್ತು ಶರೀರ ವಿe್ಞÁನವನ್ನು ಕುರಿತು ಈತ ಅಧ್ಯಯನ ನಡೆಸಿದ. ಮಿಕ್ಸೋಮೈಸಿಟೀ ಗುಂಪಿನ ಜೀವಿಗಳು ತಮ್ಮ ದೇಹರಚನೆಯಲ್ಲಿ, ಸ್ವಭಾವದಲ್ಲಿ ಮತ್ತು ಶಾರೀರಿಕ ಕ್ರಿಯೆಗಳಲ್ಲಿ ಪ್ರಾಣಿಗಳನ್ನೂ ಪ್ರಜನನಕ್ರಿಯೆಗಳಲ್ಲಿ ಸಸ್ಯಗಳನ್ನೂ ಹೋಲುವುದರಿಂದ ಈತ ಇವನ್ನು ಪ್ರಾಣಿಗಳೆಂದೇ ಪರಿಗಣಿಸಿ ಇವಕ್ಕೆ ಮೈಸಿಟೋeóÉೂೀವ ಎಂಬ ಹೆಸರು ಕೊಟ್ಟ.

	ಡೆ ಬಾರೀಯನ್ನು ಆಧುನಿಕ ಶಿಲೀಂಧ್ರವಿe್ಞÁನದ ಮತ್ತು ಸಸ್ಯರೋಗವಿe್ಞÁನದ ಸ್ಥಾಪಕನೆಂದು ಪರಿಗಣಿಸಲಾಗಿದೆ. ಬೂಷ್ಟು ಮತ್ತು ಕಾಡಿಗೆ ರೋಗಗಳಿಗೆ ಬಲಿಯಾದ ಸಸ್ಯಗಳ ಸಾಹಚರ್ಯದಲ್ಲಿರುವ ಶಿಲೀಂಧ್ರಗಳು ಇಂಥ ರೋಗಗಳಿಗೆ ಮೂಲ ಕಾರಣವಾಗಿವೆಯಲ್ಲದೆ, ಆ ರೋಗದ ಪರಿಣಾಮವನ್ನು ಉಂಟುಮಾಡುವುದಕ್ಕೆ ಕಾರಣವಾಗಿಲ್ಲ- ಎಂಬ ಅಂಶವನ್ನು ಉಂಟೆರ್‍ಸುಕುಂಗೆನ್ ವ್ಯೂಬರ್ ಡೀ ಬ್ರಾಂಡ್ ಪಿಲ್eóÉ (1953) ಎಂಬ ತನ್ನ ಗ್ರಂಥದಲ್ಲಿ ಸಮರ್ಥವಾಗಿ ತೋರಿಸಿದ. ಅಲ್ಲದೆ ತುಕ್ಕು ರೋಗ ಉಂಟುಮಾಡುವ ಶಿಲೀಂಧ್ರಗಳಲ್ಲಿ ವಿಷಮಜೀವಿತ್ವವಿದೆಯೆಂಬುದನ್ನು ಮೊದಲ ಬಾರಿಗೆ ತೋರಿಸಿಕೊಟ್ಟ ಕೀರ್ತಿ ಈತನದು. ಗೋದಿಗಿಡದ ಕಾಂಡ ತುಕ್ಕುರೋಗದ ಜೀವನಚಕ್ರ ಪೂರ್ಣಗೊಳ್ಳಲು ಗೋದಿ ಮತ್ತು ಬಾರ್ಬೆರಿ ಎಂಬ ಎರಡು ಪೋಷಕ ಜೀವಿಗಳ ಆವಶ್ಯಕತೆ ಇದೆ ಎಂಬುದನ್ನು ತನ್ನ ಪ್ರಯೋಗಗಳ ಮೂಲಕ ದೃಢೀಕರಿಸಿದ. ಹೀಗೆಯೇ ಹಲವಾರು ಶಿಲೀಂಧ್ರಗಳ ಜಟಿಲ ಜೀವನ ಚಕ್ರಗಳನ್ನು ಕುರಿತು ಆಳವಾದ ಅಧ್ಯಯನ ಮಾಡಿದ್ದಲ್ಲದೆ ಮೊದಲ ಬಾರಿಗೆ ಪರೋಪಜೀವಿ, ಪೋಷಕಜೀವಿ- ಇವುಗಳೆರಡರ ಪರಸ್ಪರ ಸಂಬಂಧವನ್ನು ಕುರಿತು ಸಂಶೋಧನೆ ನಡೆಸಿದ. ಈತನ ಕೃತಿಗಳಾದ-ಮಾರ್‍ಫೋಲೋಗೀ ಉಂಟ್ ಫಿಸಿಯೊಲೋಗೀಡೆರ್ ಪಿಲ್eóÉ ಫ್ಲೆಕ್ಟೆನ್ ಉಂಟ್ ಮಿಕ್ಸೊಮೈಸಿಟೆನ್ (1866) ಮತ್ತು ಫರ್‍ಗ್ಲೈ ಖೆಂಡೆ ಮಾರ್‍ಫೋಲೋಗೀ ಉಂಟ್ ಬಯಾಲೋಗೀ ಡೆರ್ ಪಿಲ್eóÉ ಮೈಸಿ ಟೊeóÉೂಯೆನ್ ಉಂಟ್ ಬ್ಯಾಕ್ಟೀರಿಯೆನ್ (1884) ಮುಂತಾದವು ಶಿಲೀಂಧ್ರ ವಿe್ಞÁನಕ್ಕೆ ಸಂಬಂಧಿಸಿದ ಮೂಲ ಪರಾಮರ್ಶನ ಗ್ರಂಥಗಳು. ಪೊರ್‍ಲೆಸುಂಗನ್ ವ್ಯೂಬೆರ್ ಬ್ಯಾಕ್ಟೀರಿಯೆನ್ (1885) ಎಂಬ ತನ್ನ ಗ್ರಂಥದಲ್ಲಿ ಈತ ಬ್ಯಾಕ್ಟೀರಿಯಾಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಣೆ ಕೊಟ್ಟಿದ್ದಾನೆ. ಲೋಳೆ ಬೂಷ್ಟುಗಳು ಹಾಗೂ ವಿವಿಧ ಪಾಚಿಗಳನ್ನು ಕುರಿತು ಈತ ಬರೆದಿರುವ ಪ್ರಬಂಧಗಳು ಮೌಲಿಕ ಕೃತಿಗಳಾಗಿವೆ. ಅಪಯುಗ್ಮಜನನ (1878) ಮತ್ತು ಸಹಜೀವನವನ್ನು (1879) ಕುರಿತ ಈತನ ಪ್ರಬಂಧಗಳು ವಿಚಾರಪ್ರಚೋದಕವೂ ಪರಿಣಾಮಕಾರಿಯೂ ಆಗಿವೆ. ಈತನ ಶ್ರೇಷ್ಠ ಗ್ರಂಥವಾದ ಫರ್‍ಗ್ಲೈ ಖೆಂಡೆ ಅನಾಟೊಮಿ ಡೆರ್‍ವೆಗಿಟೇಟ್ಸಿಯೊನ್ಸ್‍ಆರ್‍ಗನೆ ಡೆರ್ ಫೆನೆರೊಗಾಮೆನ್ ಉಂಟ್ ಫಾರ್ನೆ (1877) ಎಂಬುದು ಸಸ್ಯಶರೀರ ರಚನಾವಿe್ಞÁನದಲ್ಲಿ ಕಲ್ಪನೆಗಳ ಬೆಳೆವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಹೀಗೆ ಸಸ್ಯವಿe್ಞÁನದ ಮೇಲೆ ವಿಶೇಷ ಪ್ರಭಾವಬೀರಿದ ಡೆ ಬಾರೀಯ ಕೈಕೆಳಗೆ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ದೊಡ್ಡ ವಿe್ಞÁನಿಗಳೂ ಖ್ಯಾತನಾಮರೂ ಆಗಿದ್ದಾರೆ. 1888ರ ಜನವರಿ 19ರಂದು ಸ್ಟ್ರಾಸ್‍ಬರ್ಗಿನಲ್ಲಿ ಈತ ನಿಧನನಾದ.
(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ